ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ಬಳಕೆದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಆರಂಭದಲ್ಲಿ ಬಳಕೆದಾರರಿಗಾಗಿ ಆಡಿಯೋ ಕಾಲಿಂಗ್ ವ್ಯವಸ್ಥೆ ಶುರು ಮಾಡಿದ ವಾಟ್ಸಾಪ್ ಅನಂತರ ವಿಡಿಯೋ ಕಾಲಿಂಗ್ ಮಾಡುವ ವ್ಯವಸ್ಥೆ ಶುರು ಮಾಡಿತು. ಇದೀಗ ಒಂದು ಸ್ಟೇಪ್ ಮುಂದೆ ಹೋಗಿ ಗ್ರೂಪ್ ವಿಡಿಯೋ ಕಾಲಿಂಗ್ ಗೆ ಅವಕಾಶ ಕಲ್ಪಸಿಕೊಟ್ಟಿದೆ.
ಡೆವಲಪರ್ ಕಾನ್ಫರೆನ್ಸ್ F8 ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಳಕೆದಾರರು ಗ್ರೂಪ್ ವಿಡಿಯೋ ಕಾಲಿಂಗ್ ಹಾಗೂ ಗ್ರೂಪ್ ಆಡಿಯೋ ಕಾಲಿಂಗ್ ಮಾಡಬಹುದಾಗಿದೆ. ವಿಶ್ವಾದ್ಯಂತ ಐಒಎಸ್ ಬಳಕೆದಾರರು ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇದು ಲಭ್ಯವಾಗಿದೆ. ಗ್ರೂಪ್ ಆಡಿಯೋ ಅಥವಾ ವಿಡಿಯೋ ಕರೆಯಲ್ಲಿ ಒಟ್ಟಿಗೆ ನಾಲ್ಕು ಮಂದಿ ಮಾತನಾಡಬಹುದಾಗಿದೆ.
ಆರಂಭದಲ್ಲಿ ಎಂದಿನಂತೆ ಒಬ್ಬರ ಜೊತೆ ಮಾತನಾಡಬಹುದು. ನಂತ್ರ ಬೇರೆಯವರನ್ನು ಸೇರಿಸುತ್ತ ಹೋಗಬೇಕು. ಆಯಡ್ ಪಾರ್ಟಿಸಿಪಂಟ್ ಬಟನ್ ಒತ್ತಿ ಇನ್ನೊಬ್ಬರನ್ನು ಗ್ರೂಪ್ ಕರೆಗೆ ಆಹ್ವಾನಿಸಬೇಕೆಂದು ಕಂಪನಿ ಹೇಳಿದೆ. ವಾಟ್ಸಾಪ್ ಪ್ರಕಾರ, ಈಗಾಗಲೇ ಇದು ಜಾರಿಗೆ ಬಂದಿದೆ. ಇದರಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ