ಬೆಂಗಳೂರು : ಬದಲಾಗುತ್ತಿರುವ ಅಹಾರದ ಅಭ್ಯಾಸ, ಜಂಕ್, ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಹೆಚ್ಚಿನವರ ತೂಕದ ಹೆಚ್ಚಾಗುವುದರ ಜೊತೆಗೆ ಹೊಟ್ಟೆಯಲ್ಲಿ ಕೊಬ್ಬಿನಂಶ ಶೇಖರಣೆಗೊಂಡು ಹೊಟ್ಟೆ ದಪ್ಪವಾಗುತ್ತದೆ. ಇದರಿಂದ ಅವರ ಫಿಗರ್ ಅಸಹ್ಯವಾಗಿ ಕಾಣುವುದರ ಜೊತೆಗೆ ಹೊಟ್ಟೆ ಕಾಣಿಸುವಂತಹ ಡ್ರೆಸ್ ಗಳನ್ನು ಕೂಡ ಧರಿಸುವಂತಿಲ್ಲ. ಇಂತಹ ಸಮಸ್ಯೆ ಇರುವವರು ಹೊಟ್ಟೆಯನ್ನು ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಹೊಟ್ಟೆ ಕೊಬ್ಬನ್ನು ಕರಗಿಸಬಹುದು.
ಹೌದು. ಸ್ನಾನಕ್ಕೆ ಹೋಗುವ ಮೊದಲು ಹೊಟ್ಟೆಯ ಮೇಲೆ ಎಳ್ಳೆಣ್ಣೆಯಿಂದ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುವುದರ ಜೊತೆಗೆ ಹೆಚ್ಚಿನ ಪ್ರಮಾಣದ ಕೊಬ್ಬುನ್ನು ಕರಗಿಸುತ್ತದೆ.
ಹಾಗೇ ಎಳ್ಳೆಣ್ಣೆಯಲ್ಲಿ ಒಮೆಗಾ 3, 6 ಫ್ಯಾಟಿ ಆಸಿಡ್ಸ್ ಹೆಚ್ಚಾಗಿ ಇರುತ್ತವೆ. ಇವು ಬಿಪಿಯನ್ನು ಕಡಿಮೆ ಮಾಡುತ್ತವೆ. ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತವೆ. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ, ಬಿಗಳು ಹೇರಳವಾಗಿ ಇರುತ್ತವೆ. ಇವು ಚರ್ಮವನ್ನು ರಕ್ಷಿಸುವುದಷ್ಟೇ ಅಲ್ಲ, ಎಲ್ಲಾ ರೀತಿಯ ಚರ್ಮ ಸಮಸ್ಯೆಗಳನ್ನು ದೂರ ಮಾಡುತ್ತವೆ. ಎಳ್ಳೆಣ್ಣೆಯನ್ನು ನಿತ್ಯ ಬಳಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮ ಮೃದುವಾಗಿ ಬದಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ