ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇದುವರೆಗೆ ಆಡಿದ್ದ ಕೆಎಲ್ ರಾಹುಲ್ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದಾರೆ. ನಿನ್ನೆ ಈ ಎರಡೂ ತಂಡಗಳೂ ಮುಖಾಮುಖಿಯಾದಾಗ ಪಂಜಾಬ್ ಕುಸಿತ ತಡೆಯಲು ರಾಹುಲ್ ಆಸರೆಯಾಗಬೇಕಾಯಿತು.
ಆರ್ ಸಿಬಿಯ ಉಮೇಶ್ ಯಾದವ್ ದಾಳಿಗೆ ಪಂಜಾಬ್ ತಂಡ ತತ್ತರಿಸುತ್ತಿದ್ದರೆ, ಹಳೇ ತಂಡದ ವಿರುದ್ಧವೇ ಸಿಡಿದೆದ್ದ ಪಂಜಾಬ್ ಆರಂಭಿಕ ರಾಹುಲ್ ಬಂಡೆಯಂತೆ ನಿಂತು 30 ಎಸೆತಗಳಲ್ಲಿ 4 ಸಿಕ್ಸರ್ ಗಳೊಂದಿಗೆ 47 ರನ್ ಸಿಡಿಸಿದರು.
ವಿಶೇಷವೆಂದರೆ ರಾಹುಲ್ ಗೆ ಸಾಥಿಯಾಗಿ ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಕರುಣ್ ನಾಯರ್ 29 ರನ್ ಗಳಿಸಿ ಪಂಜಾಬ್ ಮಾನ ಕಾಪಾಡಿದರು. ಅಂತೂ ತಂಡ ಯಾವುದಾದರೇನು? ತವರಿನಲ್ಲಿ ಆಡುವ ಖುಷಿ ಇಬ್ಬರಲ್ಲೂ ಇತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.