ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ನಿನ್ನೆ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಟೀಂ ಇಂಡಿಯಾದಲ್ಲಿ ಸಿಗದ ಆರಂಭಿಕ ಸ್ಥಾನದಿಂದ ಹತಾಶರಾಗಿದ್ದ ರಾಹುಲ್, ಐಪಿಎಲ್ ನಲ್ಲಿ ಆರಂಭಿಕ ಸ್ಥಾನ ಸಿಕ್ಕಿದ್ದೇ ತಡ, ಇದ್ದ ಸಿಟ್ಟು, ಹತಾಶೆಯನ್ನೆಲ್ಲಾ ಬಾಲ್ ಮೇಲೆ ತೋರಿಸಿದರು. ಅವರ ಈ ಸಿಡಿಲಿನ ಹೊಡೆತದಿಂದಾಗಿ ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್, 6 ಬೌಂಡರಿಗಳ ನೆರವಿನಿಂದ ಅರ್ಧಶತಕ ದಾಖಲಾಯಿತು.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ದಾಖಲಿಸಿದ ಹಿರಿಮೆ ರಾಹುಲ್ ಪಾಲಾಯಿತು. ದುರಾದೃಷ್ಟವಶಾತ್ 51 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಅದಕ್ಕೂ ಮೊದಲು ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್ ಬಾಲ್ ಗೆ ಚೆನ್ನಾಗಿ ಚಚ್ಚಿದರು. ಅವರ ಈ ಸಾಹಸಮಯ ಇನಿಂಗ್ಸ್ ನಿಂದಾಗಿ ಪಂಜಾಬ್ ದೆಹಲಿ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.