Publish Date: Mon, 09 Apr 2018 (09:12 IST)
Updated Date: Mon, 09 Apr 2018 (09:17 IST)
ಕೋಲ್ಕೊತ್ತಾ: ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ.
ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಕೋಲ್ಕೊತ್ತಾ ಆರಂಭಿಕ ಸುನಿಲ್ ನರೈನ್ ಸುನಾಮಿಯಂತಹ ಬ್ಯಾಟಿಂಗ್ ಗೆ ಬೆಂಗಳೂರು ಕೊಚ್ಚಿ ಹೋಯಿತು.
ಆರ್ ಸಿಬಿ ನೀಡಿದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕೊತ್ತಾಗೆ ಸುನಿಲ್ 19 ಎಸೆತಗಳಲ್ಲಿ 50 ರನ್ ಸಿಡಿಸಿ ಗೆಲುವು ಸುಲಭವಾಗಿಸಿದರು. ಕೊನೆಯ ಕ್ರಮಾಂಕದಲ್ಲಿ ನಾಯಕ ದಿನೇಶ್ ಕಾರ್ತಿಕ್ (35), ನಿತೀಶ್ ರಾಣಾ (34) ಗೆಲುವಿನ ಗುರಿ ತಲುಪಿಸಿದರು. ವಿಶೇಷವೆಂದರೆ ಅಂತಿಮವಾಗಿ ಕರ್ನಾಟಕದವೇ ಆದ ವಿನಯ್ ಕುಮಾರ್ ಬೌಂಡರಿ ಗಳಿಸಿ ಬೆಂಗಳೂರು ತಂಡಕ್ಕೆ ಸೋಲುಣಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.