Publish Date: Sat, 14 Apr 2018 (07:39 IST)
Updated Date: Sat, 14 Apr 2018 (07:41 IST)
ಚೆನ್ನೈ: ಐಪಿಎಲ್ 11 ನೇ ಆವೃತ್ತಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಬಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಭಾರೀ ಉತ್ಸಾಹದಲ್ಲಿ ತವರಿನಲ್ಲಿ ಕಣಕ್ಕಿಳಿದಿತ್ತು. ಆದರೆ ಅದು ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ.
ಕಾವೇರಿ ಹೋರಾಟಗಾರರ ಪ್ರತಿಭಟನೆಗೆ ಬೆಚ್ಚಿದ ಐಪಿಎಲ್ ಅಧಿಕಾರಿಗಳು ಚೆನ್ನೈ ಮೈದಾನದ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಿದ್ದಾರೆ. ಇದರಿಂದಾಗಿ ತವರಿನಲ್ಲಿ ಆಡಲು ಸಾಧ್ಯವಾಗದೆ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಮೊನ್ನೆಯ ಪಂದ್ಯ ಮುಕ್ತಾಯವಾದ ಮೇಲೆ ನಾಯಕ ಧೋನಿ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸುರೇಶ್ ರೈನಾ ಕೂಡಾ ಟ್ವೀಟ್ ಮಾಡಿದ್ದು, ತವರಿನಲ್ಲಿ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಪುಣೆಗೆ ಹೊರಟಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.