Publish Date: Sat, 21 Aug 2021 (16:24 IST)
Updated Date: Sat, 21 Aug 2021 (16:29 IST)
ಬೆಂಗಳೂರು: ಐಪಿಎಲ್ 14 ರ ಉಳಿದ ಪಂದ್ಯಗಳಿಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಕೋಚ್ ಸಿಮನ್ ಕಾಟಿಚ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣ ನೀಡಿ ಸಿಮನ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಆರ್ ಸಿಬಿ ತಂಡದ ಭಾಗವಾಗಿದ್ದರು.
ಇದೀಗ ಸಿಮನ್ ಅನುಪಸ್ಥಿತಿಯಲ್ಲಿ ಯುಎಇನಲ್ಲಿ ಮೈಕ್ ಹಸನ್ ಆರ್ ಸಿಬಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆರ್ ಸಿಬಿ ಸದ್ಯಕ್ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.