ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ವಿಶ್ವದ ಎಲ್ಲಾ ಬೌಲರ್ ಗಳನ್ನೂ ಕಾಡಿದ್ದರು. ಆದರೆ ತೆಂಡುಲ್ಕರ್ ಗೂ ಒಂದು ವೀಕ್ನೆಸ್ ಇತ್ತು ಎಂದು ಮಾಜಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಆಡುವ ದಿನಗಳಲ್ಲಿ ಈ ಇಬ್ಬರ ನಡುವಿನ ಕಾದಾಟ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿತ್ತು. ಇದೀಗ ತೆಂಡುಲ್ಕರ್ ಗಿದ್ದ ವೀಕ್ನೆಸ್ ಬಗ್ಗೆ ಮುರಳೀಧರನ್ ಹೇಳಿದ್ದಾರೆ.
ಸಚಿನ್ ಆಫ್ ಸ್ಪಿನ್ನರ್ ಗಳನ್ನು ಎದುರಿಸುವಾಗ ಕೊಂಚ ತಡಬಡಾಯಿಸುತ್ತಿದ್ದರು. ಇದುವೇ ಅವರಿಗಿದ್ದ ಸಣ್ಣ ವೀಕ್ನೆಸ್. ಆದರೆ ಅವರು ಬೌಲರ್ ಗಳನ್ನು ದಂಡಿಸುತ್ತಿರಲಿಲ್ಲ. ಬಾಲ್ ನ್ನು ಚೆನ್ನಾಗಿ ಅರಿತು ಬ್ಯಾಟ್ ಮಾಡುತ್ತಿದ್ದರು. ಆಫ್ ಸ್ಪಿನ್ ಅವರ ವೀಕ್ನೆಸ್ ಆಗಿತ್ತು. ಹೀಗಾಗಿಯೇ ನಾನು ಸಾಕಷ್ಟು ಸಲ ಅವರ ವಿಕೆಟ್ ಪಡೆದಿದ್ದೆ ಎಂದು ಮುರಳೀಧರನ್ ಹೇಳಿದ್ದಾರೆ.