Publish Date: Sat, 21 Aug 2021 (10:18 IST)
Updated Date: Sat, 21 Aug 2021 (10:41 IST)
ಲಂಡನ್: ಎಲ್ಲಾ ಸರಿ ಹೋಗಿದ್ದರೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅಶ್ವಿನ್ ಅವಕಾಶ ತಪ್ಪಿಸಿದ್ದು ಯಾರು ಗೊತ್ತಾ? ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ನಾನು ಎರಡನೇ ಟೆಸ್ಟ್ ಪಂದ್ಯವಾಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದು ಕೈ ತಪ್ಪಿಹೋಯ್ತು. ಇದಕ್ಕೆ ಕಾರಣ ಮಳೆ ಎಂದು ಅಶ್ವಿನ್ ತಮಾಷೆಯಾಗಿ ದೂರಿದ್ದಾರೆ.
ಎರಡನೇ ಟೆಸ್ಟ್ ಆಡುವ ಕೆಲವೇ ಕ್ಷಣಗಳ ಮೊದಲು ಬಿಸಿಲಿತ್ತು. ಆಗ ಒಣಗಾಳಿಯಿದೆ. ಈವತ್ತು ನೀವು ಆಡುತ್ತೀರಿ ಎಂದು ನನಗೆ ಹೇಳಿದ್ದರು. ನಾನು ಇನ್ನೇನು ಸಿದ್ಧರಾಗಬೇಕು ಎನ್ನುವಾಗ ಮಳೆ ಬಂತು. ಎಲ್ಲವೂ ಉಲ್ಟಾ ಆಯ್ತು. ಮಳೆಯಿಂದಾಗಿ ನನ್ನ ಅವಕಾಶ ಹೋಯ್ತು. ಅಷ್ಟಿದ್ದರೆ ಒಣಗಾಳಿ ಕೆಲವೇ ಕ್ಷಣ ಬಂದು ಯಾಕೆ ನನಗೆ ಇಲ್ಲದ ಆಸೆ ಹುಟ್ಟಿಸಬೇಕಾಗಿತ್ತು? ಎಂದು ಅಶ್ವಿನ್ ತಮಾಷೆಯಾಗಿಯೇ ಹೇಳಿಕೊಂಡಿದ್ದಾರೆ.