ಮುಂಬೈ: ಐಪಿಎಲ್ 14 ರ ಕೂಟ ಭಾರತದಲ್ಲೇ ನಡೆಯುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ಆದರೆ ಅದರ ಜೊತೆಗೇ ಬಿಸಿಸಿಐ ಶಾಕ್ ಕೂಡಾ ಕೊಟ್ಟಿದೆ.
ಏಪ್ರಿಲ್ ನಲ್ಲಿ ಆರಂಭವಾಗಲಿರುವ ಐಪಿಎಲ್ 14 ನೇ ಆವೃತ್ತಿ ಭಾರತದಲ್ಲೇ ನಡೆಯುತ್ತಿದ್ದರೂ ಪ್ರೇಕ್ಷಕರಿಗೆ ಖುದ್ದಾಗಿ ಮೈದಾನಕ್ಕೆ ಬಂದು ವೀಕ್ಷಿಸುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.
ಲೀಗ್ ಹಂತದ ಪಂದ್ಯಗಳನ್ನು ವೀಕ್ಷಿಸಲಂತೂ ಅವಕಾಶವೇ ಇಲ್ಲ. ಹಾಗಿದ್ದರೂ ಪರಿಸ್ಥಿತಿ ನೋಡಿಕೊಂಡು ಪ್ಲೇ ಆಫ್ ಮತ್ತು ಫೈನಲ್ ಪಂದ್ಯಕ್ಕೆ ಸೀಮಿತ ಪ್ರೇಕ್ಷಕರಿಗೆ ಅವಕಾಶ ಸಿಗಬಹುದು. ಈ ಪಂದ್ಯಗಳು ಅಹಮ್ಮದಾಬಾದ್ ನ ವಿಶ್ವದ ಬೃಹತ್ ಕ್ರೀಡಾಂಗಣ ಮೊಟೆರಾದಲ್ಲಿ ನಡೆಯುತ್ತಿದೆ.