Publish Date: Sun, 07 Mar 2021 (09:53 IST)
Updated Date: Sun, 07 Mar 2021 (09:54 IST)
ದುಬೈ: ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆಯುವುದೆಂದು ಇದುವರೆಗೆ ತೀರ್ಮಾನಿಸಲಾಗಿತ್ತು. ಆದರೆ ಐಸಿಸಿ ಈಗ ತನ್ನ ನಿರ್ಧಾರ ಬದಲಾಯಿಸುವ ಸಾಧ್ಯತೆಯಿದೆ.
ಕ್ರಿಕೆಟ್ ಕಾಶಿ ಎಂದೇ ಪರಿಗಣಿತವಾಗಿರುವ ಲಾರ್ಡ್ಸ್ ಅಂಗಣದಲ್ಲಿ ಕ್ರಿಕೆಟ್ ಆಯೋಜಿಸಲು ಕೊರೋನಾ ಭೀತಿ ಅಡ್ಡಿಯಾಗಿದೆ. ಆದರೆ ಈಗಲೇ ಏನನ್ನೂ ಹೇಳಲಾಗದು. ಹಾಗಿದ್ದರೂ ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ನಡೆಯಲಿರುವ ಫೈನಲ್ ಪಂದ್ಯ ಲಾರ್ಡ್ಸ್ ನಿಂದ ಬೇರೆಡೆಗೆ ಶಿಫ್ಟ್ ಆಗುವ ಸಾಧ‍್ಯತೆಯೇ ಹೆಚ್ಚು ಎನ್ನಲಾಗಿದೆ.
ಅಂತಿಮ ನಿರ್ಧಾರಕ್ಕೆ ಮುನ್ನ ಐಸಿಸಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಿದೆ. ಜುಲೈನಲ್ಲಿ ಪಂದ್ಯ ನಡೆಯಬೇಕಿರುವುದರಿಂದ ಈಗಲೇ ಏನನ್ನೂ ಅಂತಿಮಗೊಳಿಸಲಾಗಿಲ್ಲ.
ಭಾರತ 12 ಗೆಲುವು 4 ಸೋಲು ಮತ್ತು 1 ಡ್ರಾ ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.