ಮುಂಬೈ: ಐಪಿಎಲ್ 14 ರ ದಿನಾಂಕ ಪ್ರಕಟಣೆಯಾಗಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ಆರು ಮೈದಾನಗಳಲ್ಲಿ ಐಪಿಎಲ್ 14 ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಒಟ್ಟು 52 ದಿನಗಳ ಕಾಲ ಐಪಿಎಲ್ 14 ಕೂಟ ನಡೆಯಲಿದ್ದು, 60 ಪಂದ್ಯಗಳಿರಲಿವೆ. ಈ ಬಾರಿ ಭಾರತದಲ್ಲೇ ಕೂಟ ನಡೆಯುತ್ತಿದೆ. ಅಹಮ್ಮದಾಬಾದ್ ನಲ್ಲಿ ಅಂತಿಮ ಘಟ್ಟದ ಪಂದ್ಯಗಳು ನಡೆಯಲಿವೆ. ಉಳಿದಂತೆ ಚೆನ್ನೈ, ಬೆಂಗಳೂರು, ನವದೆಹಲಿ, ಕೋಲ್ಕೊತ್ತಾ, ಮತ್ತು ಮುಂಬೈಯಲ್ಲಿ ಪಂದ್ಯಗಳು ನಡೆಯಲಿವೆ.
ಕಳೆದ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಮುಂಬೈ ಜೊತೆಗೆ ಆರಂಭಿಕ ಪಂದ್ಯವಾಡುವ ತಂಡ ಯಾವುದು ಎಂದು ಸದ್ಯದಲ್ಲೇ ತಿಳಿದುಬರಲಿದೆ. ಜೊತೆಗೆ ವೇಳಾಪಟ್ಟಿಯನ್ನೂ ಬಿಸಿಸಿಐ ಸದ್ಯದಲ್ಲೇ ಹೊರಹಾಕಲಿದೆ.