Publish Date: Wed, 10 Mar 2021 (10:22 IST)
Updated Date: Wed, 10 Mar 2021 (10:23 IST)
ಚೆನ್ನೈ: ಐಪಿಎಲ್ 14 ಕ್ಕೆ ತಯಾರಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 14 ಕ್ಕೆ ತಯಾರಿ ಆರಂಭಿಸಿದ್ದ, ಚೆನ್ನೈನಲ್ಲಿ ಕ್ಯಾಂಪ್ ಆರಂಭವಾಗಿದೆ. ನಿನ್ನೆಯಿಂದ ಧೋನಿ ಕೂಡಾ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.
ಧೋನಿ ಮೈದಾನಕ್ಕೆ ಮರಳುತ್ತಿದ್ದಂತೇ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ನೆಟ್ಟಿಗರೂ ಧೋನಿ ಮರಳಿದ್ದನ್ನು ಸ್ವಾಗತಿಸಿದ್ದಾರೆ. ನಿಮ್ಮ ಹೆಲಿಕಾಪ್ಟರ್ ಶಾಟ್ ನೋಡಲು ಕಾತುರರಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಕೋರಿದ್ದಾರೆ.