Publish Date: Sat, 05 Sep 2020 (12:13 IST)
Updated Date: Sat, 05 Sep 2020 (12:15 IST)
ದುಬೈ: ಕ್ವಾರಂಟೈನ್ ಅವಧಿ ಮುಗಿಸಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಕಣಕ್ಕಿಳಿದಿದ್ದು, ಅಭ್ಯಾಸಕ್ಕೂ ಮೊದಲು ನಾಯಕ ಧೋನಿ ಸಹ ಕ್ರಿಕೆಟಿಗರನ್ನು ಚಿಯರ್ ಅಪ್ ಮಾಡುವ ಕೆಲಸ ಮಾಡಿದ್ದಾರೆ.
ಇಷ್ಟು ದಿನ ಕ್ವಾರಂಟೈನ್ ನಿಂದಾಗಿ ಪ್ರತ್ಯೇಕವಾಗಿ ಹೋಟೆಲ್ ರೂಂನಲ್ಲಿ ಕಳೆದಿದ್ದ ಕ್ರಿಕೆಟಿಗರಲ್ಲಿ ಉತ್ಸಾಹ ತುಂಬಲು ಧೋನಿ ಅಭ್ಯಾಸಕ್ಕೆ ಮೊದಲು ಅವರ ಜತೆಗೆ ಬ್ರೇಕ್ ಫಾಸ್ಟ್ ಸೆಷನ್ ನಡೆಸಿದ್ದಾರೆ. ಈ ವೇಳೆ ಎಲ್ಲರ ಜತೆ ಜಾಲಿಯಾಗಿ ಕಳೆದಿದ್ದಾರೆ. ಬಳಿಕವಷ್ಟೇ ಚೆನ್ನೈ ತಂಡದ ಆಟಗಾರರು ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.