Publish Date: Fri, 04 Sep 2020 (12:19 IST)
Updated Date: Fri, 04 Sep 2020 (12:21 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊರೋನಾದಿಂದ ತತ್ತರಿಸಿತ್ತು. ಆದರೆ ಈಗ ತಂಡದ ಆಟಗಾರರು ನಿಟ್ಟುಸಿರುವ ಬಿಡುವಂತಾಗಿದೆ.
ಕೊರೋನಾ, ಸುರೇಶ್ ರೈನಾ ವಿವಾದದಿಂದ ಕುಗ್ಗಿ ಹೋಗಿದ್ದ ಚೆನ್ನೈ ತಂಡದಲ್ಲಿ ಈಗ ಸಂತಸ ಮೂಡಿದೆ. ಕಾರಣ ಆಟಗಾರರೆಲ್ಲರೂ ಕೊರೋನಾದಿಂದ ಚೇತರಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದಿದೆ. ಹೀಗಾಗಿ ನಿಗದಿಯಾದಂತೇ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಅಂತಿಮ ತೀರ್ಮಾನ ಹೊರಬೀಳಲಿದೆ.