Publish Date: Fri, 04 Sep 2020 (10:11 IST)
Updated Date: Fri, 04 Sep 2020 (10:12 IST)
ಮುಂಬೈ: ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬಂದಿರುವ ಸುರೇಶ್ ರೈನಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವ್ಯಾಟ್ಸಪ್ ಗ್ರೂಪ್ ನಿಂದಲೂ ಕೊಕ್ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ರೈನಾ ಬಗ್ಗೆ ಇತ್ತೀಚೆಗೆ ತಂಡದ ಮಾಲಿಕ ಎನ್ ಶ್ರೀನಿವಾಸನ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ವಿವಾದವಾಗುತ್ತಿದ್ದಂತೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಇದರ ನಡುವೆಯೇ ರೈನಾ ಮತ್ತೆ ಸಿಎಸ್ ಕೆ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿತ್ತು. ಇದೀಗ ರೈನಾ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಸಿಎಸ್ ಕೆ ಮ್ಯಾನೇಜ್ ಮೆಂಟ್ ಅವರನ್ನು ತಂಡದ ವ್ಯಾಟ್ಸಪ್ ಗ್ರೂಪ್ ನಿಂದಲೂ ಹೊರಹಾಕಿದೆ ಎಂದು ವರದಿಯಾಗಿದೆ.