Publish Date: Thu, 03 Sep 2020 (11:53 IST)
Updated Date: Thu, 03 Sep 2020 (11:54 IST)
ಮುಂಬೈ: ಐಪಿಎಲ್ 13 ರಿಂದ ಹೊರಬಂದಿರುವ ಸುರೇಶ್ ರೈನಾ ಇನ್ನು ಮುಂದಿನ ದಿನಗಳಲ್ಲಿ ಸಿಎಸ್ ಕೆ ತಂಡಕ್ಕೆ ಪುನರಾಗಮನವಾಗಲ್ಲ ಎಂಬ ಸುದ್ದಿಗಳ ಬೆನ್ನಲ್ಲೇ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ರೈನಾ ಇದೇ ಮೊದಲ ಬಾರಿಗೆ ಐಪಿಎಲ್ ನಿಂದ ಹೊರಬರುವ ತಮ್ಮ ನಿರ್ಧಾರದ ಬಗ್ಗೆ ಹೇಳಿಕೆ ನೀಡಿದ್ದು, ಚೆನ್ನೈ ತಂಡಕ್ಕೆ ಮತ್ತೆ ಮರಳುವೆ ಎಂದಿದ್ದಾರೆ.
ಯಾರೂ 12.5 ಕೋಟಿ ರೂ.ಗಳನ್ನು ಬೇಡ ಎಂದು ಹೇಳಿ ಹಿಂದಕ್ಕೆ ಬರಲಾರರು. ಆದರೆ ನನ್ನ ಕುಟುಂಬದಲ್ಲಿ ನಡೆದ ಘಟನೆ ನನ್ನನ್ನು ಘಾಸಿಗೊಳಿಸಿತ್ತು. ಈ ಸಂದರ್ಭದಲ್ಲಿ ನನಗೆ ನನ್ನ ಕುಟುಂಬವೇ ಮುಖ್ಯವೆನಿಸಿತು. ಆದರೆ ಚೆನ್ನೈ ತಂಡದೊಂದಿಗೆ ನಾನು ವೈಮನಸ್ಯ ಹೊಂದಿಲ್ಲ. ನಾನು ಮತ್ತೆ 2020 ರೊಳಗಾಗಿ ಸಿಎಸ್ ಕೆಗೆ ಮರಳುವೆ. ಇನ್ನೂ ನಾಲ್ಕೈದು ವರ್ಷ ಐಪಿಎಲ್ ಆಡುವೆ’ ಎಂದಿದ್ದಾರೆ.