Publish Date: Sat, 03 Oct 2020 (09:33 IST)
Updated Date: Sat, 03 Oct 2020 (09:34 IST)
ದುಬೈ: ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎನ್ನುವ ಮಾತಿದೆಯಲ್ಲಾ? ಅದು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಗೆ ಈ ಐಪಿಎಲ್ ನಲ್ಲಿ ಪದೇ ಪದೇ ಅನುಭವವಾಗುತ್ತಿದೆ.
ಒಳ್ಳೆಯ ಟೀಂ, ಒಳ್ಳೆಯ ಮೊತ್ತ, ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಗೆಲುವು ಮಾತ್ರ ಮರೀಚಿಕೆಯಾಗುತ್ತಿದೆ. ಈ ಕೂಟದಲ್ಲಿ ಇದುವರೆಗೆ ಎರಡು ಪಂದ್ಯಗಳಲ್ಲಿ ಗೆಲುವಿನ ಹೊಸ್ತಿಲಿನಲ್ಲಿ ಎಡವಿರುವ ಪಂಜಾಬ್ ಹಾಗೂ ನಾಯಕ ಕೆಎಲ್ ರಾಹುಲ್ ಈಗ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ರಾಹುಲ್ ಬೆಂಬಲಕ್ಕೆ ಬಂದಿದ್ದಾರೆ. ‘ಹೊಸ ನಾಯಕನಾಗಿ ನಾವೆಲ್ಲರೂ ತಪ್ಪು ಮಾಡುತ್ತೇವೆ. ಸಕಾರಾತ್ಮಕವಾಗಿ ಯೋಚಿಸಿ ಇದರಿಂದ ಹೊರಬರಬೇಕಿದೆ’ ಎಂದು ಯುವಿ ರಾಹುಲ್ ಬೆನ್ನಿಗೆ ನಿಂತಿದ್ದಾರೆ.