Publish Date: Fri, 02 Oct 2020 (10:08 IST)
Updated Date: Fri, 02 Oct 2020 (10:10 IST)
ದುಬೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೊಸ ದಾಖಲೆ ಮಾಡಲಿದ್ದಾರೆ. ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಲಿರುವ ಧೋನಿ ಐಪಿಎಲ್ ನಲ್ಲಿ ಗರಿಷ್ಠ ಪಂದ್ಯವಾಡಿದ ದಾಖಲೆ ಮಾಡಲಿದ್ದಾರೆ.
193 ಪಂದ್ಯವಾಡಿರುವ ಧೋನಿ ಸದ್ಯಕ್ಕೆ ಸುರೇಶ್ ರೈನಾ ಜತೆಗೆ ಐಪಿಎಲ್ ನಲ್ಲಿ ಗರಿಷ್ಠ ಪಂದ್ಯವಾಡಿದ ದಾಖಲೆ ಹಂಚಿಕೊಂಡಿದ್ದಾರೆ. ಆದರೆ ಇಂದಿನ ಪಂದ್ಯವಾಡುವ ಮೂಲಕ ರೈನಾ ದಾಖಲೆಯನ್ನು ಹಿಂದಿಕ್ಕಿ ಧೋನಿ ಅಗ್ರ ಸ್ಥಾನಕ್ಕೇರಲಿದೆ. 2008 ರಿಂದ ಧೋನಿ ಐಪಿಎಲ್ ಆಡುತ್ತಿದ್ದಾರೆ. ಧೋನಿ 193 ಪಂದ್ಯಗಳಿಂದ 4476 ರನ್ ಗಳಿಸಿದ್ದಾರೆ.