Publish Date: Fri, 02 Oct 2020 (11:35 IST)
Updated Date: Fri, 02 Oct 2020 (11:37 IST)
ದುಬೈ: ಐಪಿಎಲ್ 13 ರಲ್ಲಿ ಗರಿಷ್ಠ ರನ್ ಗಳಿಸಿದವರಿಗೆ ಸಿಗುವ ಆರೆಂಜ್ ಕ್ಯಾಪ್ ಗೌರವ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ನಡುವೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಮೊನ್ನೆಯಷ್ಟೇ ರಾಹುಲ್ ಬಳಿಯಿದ್ದ ಆರೆಂಜ್ ಕ್ಯಾಪ್ ನಿನ್ನೆಯ ಪಂದ್ಯದ ಬಳಿಕ ಮಯಾಂಕ್ ಪಾಲಾಗಿದೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ಸದ್ಯದಲ್ಲೇ ಅವನಿಂದ ಆರೆಂಜ್ ಕ್ಯಾಪ್ ಕಿತ್ತುಕೊಳ್ಳುವೆ ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ 25 ರನ್ ಗಳಿಸಿದ ಮಯಾಂಕ್ ಒಟ್ಟು ಈ ಕೂಟದಲ್ಲಿ 246 ರನ್ ಗಳಿಸುವುದರೊಂದಿಗೆ ಗರಿಷ್ಠ ರನ್ ಸರದಾರ ಎನಿಸಿದರು. ಮೊದಲ ಸ್ಥಾನದಲ್ಲಿದ್ದ ರಾಹುಲ್ ಎರಡನೇ ಸ್ಥಾನಕ್ಕೆ ಜಾರಿದ್ದು 239 ರನ್ ಗಳಿಸಿದ್ದಾರೆ. ಹೀಗಾಗಿ ಕೂದಲೆಳೆಯಲ್ಲಿ ಆರೆಂಜ್ ಕ್ಯಾಪ್ ಮಯಾಂಕ್ ಪಾಲಾಗಿದೆ. ಆರೆಂಜ್ ಕ್ಯಾಪ್ ಪಂಜಾಬ್ ತಂಡದ ಬಳಿಯಲ್ಲೇ ಇರುವುದು ಸಂತೋಷ. ಮಯಾಂಕ್ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಸದ್ಯದಲ್ಲೇ ಅವನಿಂದ ಆರೆಂಜ್ ಕ್ಯಾಪ್ ನನ್ನದಾಗಿಸಿಕೊಳ್ಳುವೆ ಎಂದಿದ್ದಾರೆ ರಾಹುಲ್.