Publish Date: Thu, 29 Oct 2020 (10:01 IST)
Updated Date: Thu, 29 Oct 2020 (10:03 IST)
ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯವಾಗಿದ್ದರೂ ತಂಡದ ಜತೆಗೇ ಪ್ರಯಾಣಿಸುತ್ತಿರುವುದರ ಔಚಿತ್ಯವೇನೆಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ.
ರೋಹಿತ್ ಓರ್ವ ಪ್ರಮುಖ ಆಟಗಾರ. ಅವರು ಗಾಯದ ನೆಪದಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದಿರುವುದು ಬೇಸರದ ವಿಚಾರ. ಒಂದು ವೇಳೆ ಅವರಿಗೆ ಗಾಯವಾಗಿರುವುದು ನಿಜವಾದರೆ ಅವರು ಇನ್ನೂ ತಂಡದ ಜತೆಗೇ ಯಾಕೆ ಪ್ರಯಾಣಿಸುತ್ತಿದ್ದಾರೆ? ಅವರ ಗಾಯದ ನಿಜ ಸ್ಥಿತಿಯೇನೆಂದು ಯಾರಿಗೂ ಸರಿಯಾದ ಮಾಹಿತಿಯಿಲ್ಲ. ಈ ಬಗ್ಗೆ ಮಾಧ‍್ಯಮಗಳು ಪ್ರಶ್ನಿಸಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.
Krishnaveni K
Publish Date: Thu, 29 Oct 2020 (10:01 IST)
Updated Date: Thu, 29 Oct 2020 (10:03 IST)