Publish Date: Thursday, 29 October 2020 (09:51 IST)
Updated Date: Thursday, 29 October 2020 (09:53 IST)
ದುಬೈ: ಐಪಿಎಲ್ 13 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಸ್ಪೂರ್ತಿಯುತ ಮಾತನಾಡಿದ್ದಾರೆ.
ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ‘ನಾವು ಅಂದುಕೊಂಡ ರೀತಿಯ ಫಲಿತಾಂಶ ಇಂದು ಬಂದಿಲ್ಲ. ಆದರೆ ನಾವು ಪ್ರಯತ್ನ ಮುಂದುವರಿಸಲಿದ್ದೇವೆ. ಮುಂದಿನ ಪಂದ್ಯದ ಕಡೆಗೆ ಗಮನಕೊಡುತ್ತೇವೆ’ ಎಂದು ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.