Publish Date: Thu, 29 Oct 2020 (09:44 IST)
Updated Date: Thu, 29 Oct 2020 (09:45 IST)
ದುಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾಕ್ಕೆ ತಮ್ಮನ್ನು ಆಯ್ಕೆ ಮಾಡದ ಆಯ್ಕೆಗಾರರಿಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮೈದಾನದಲ್ಲೇ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ ಸೂರ್ಯಕುಮಾರ್ ಬಳಿಕ ಎದೆ ತಟ್ಟಿಕೊಂಡು ನಾನಿದ್ದೇನೆ ಎಂಬಂತೆ ಸನ್ನೆ ಮಾಡಿದ್ದು ನೋಡಿ ಕಾಮೆಂಟೇಟರ್ ಹರ್ಷ ಭೋಗ್ಲೆ ನೋಡಿ ಸೂರ್ಯ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿಲ್ಲ. ಅದಕ್ಕೇ ನನ್ನ ಕಡೆಗೆ ನೋಡಿ, ನಾನು ಆಡಬಲ್ಲೆ ಎಂದು ಹೇಳುತ್ತಿದ್ದಾನೆ’ ಎಂದು ವ್ಯಾಖ್ಯಾನಿಸಿದ್ದಾರೆ. ನಿನ್ನೆಯ ಅವರ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಕೂಡಾ ತಮ್ಮನ್ನು ಕಡೆಗಣಿಸಿದವರಿಗೆ ನೀಡಿದ ತಿರುಗೇಟಿನಂತಿತ್ತು ಎಂದರೆ ತಪ್ಪಾಗಲಾರದು.