ಮುಂಬೈ: ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾ ನಾಯಕತ್ವ ಯಾರದ್ದಾಗಿರಬಹುದು ಎಂಬುದಕ್ಕೆ ಆಯ್ಕೆಗಾರರು ಈಗಲೇ ತಯಾರಿ ನಡೆಸಿದಂತಿದೆ.
ಆಸ್ಟ್ರೇಲಿಯಾ ಸರಣಿಗೆ ಪ್ರಕಟಿಸಲಾಗಿರುವ ಟಿ20 ಪಂದ್ಯಗಳಿಗೆ ಕೆಎಲ್ ರಾಹುಲ್ ರನ್ನು ಉಪನಾಯಕನಾಗಿ ಮಾಡಲಾಗಿದೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಆಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಹುಲ್ ಭವಿಷ್ಯದಲ್ಲಿ ಟೀಂ ಇಂಡಿಯಾ ಚುಕ್ಕಾಣಿ ಹಿಡಿಯುವ ಎಲ್ಲಾ ಸಾಧ‍್ಯತೆಯೂ ಇದೆ. ಇದಕ್ಕೆ ಪುಷ್ಠಿಯೆಂಬಂತೆ ಈಗ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿ ರಾಹುಲ್ ಒಳ್ಳೆಯ ಅನುಭವ ಗಳಿಸುತ್ತಿದ್ದಾರೆ. ಮುಂದೆ ಟೀಂ ಇಂಡಿಯಾದಲ್ಲಿ ಉಪನಾಯಕರಾಗಿ ಅನುಭವ ಗಳಿಸಿ ನಾಯಕನ ಪಟ್ಟಕ್ಕೇರುವ ಎಲ್ಲಾ ಲಕ್ಷಣಗಳೂ ತೋರುತ್ತಿವೆ.