Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದುಬೈ: ಐಪಿಎಲ್ 13 ರಲ್ಲಿ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರನ್ನು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದು ಈಗ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಆರ್ ಸಿಬಿ ನಾಯಕರಾಗುವ ಮೊದಲು ಕೊಹ್ಲಿ ಟೀಂ ಇಂಡಿಯಾ ನಾಯಕರೂ ಹೌದು. ಈಗಾಗಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಪ್ರತಿಭೆಯುಳ್ಳ ಯುವ ಆಟಗಾರನನ್ನು ಅದರಲ್ಲೂ ಕೊಹ್ಲಿಯನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುವ ಸೂರ್ಯಕುಮಾರ್ ರನ್ನು ಕೊಹ್ಲಿ ಈ ರೀತಿ ಸ್ಲೆಡ್ಜಿಂಗ್ ಮಾಡಿದ್ದು ಸರಿಯಲ್ಲ ಎಂದು ಟ್ವಿಟರಿಗರು ಕಿಡಿ ಕಾರಿದ್ದಾರೆ. ನಿನ್ನೆ ಬ್ಯಾಟಿಂಗ್ ಗೆ ಸಿದ್ಧವಾಗಿ ನಿಂತಿದ್ದ ಸೂರ್ಯಕುಮಾರ್ ಬಳಿ ಬಾಲ್ ಒರೆಸುತ್ತಾ ಬಂದ ಕೊಹ್ಲಿ ಪಕ್ಕದಲ್ಲೇ ನಿಂತು ಸ್ಲೆಡ್ಜಿಂಗ್ ಮಾಡಿದ್ದರು. ಆದರೆ ಕೊಹ್ಲಿ ಏನೋ ಹೇಳಲು ಹೊರಡುತ್ತಿದ್ದಂತೇ ತಮಗೆ ಸಂಬಂಧವೇ ಇಲ್ಲದಂತೆ ಸೂರ್ಯಕುಮಾರ್ ಅಲ್ಲಿಂದ ಜಾಗ ಖಾಲಿ ಕೊಹ್ಲಿಗೆ ಸರಿಯಾಗಿಯೇ ಅವಮಾನ ಮಾಡಿದ್ದಾರೆ. ಇದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.