Publish Date: Tue, 27 Oct 2020 (10:55 IST)
Updated Date: Tue, 27 Oct 2020 (10:56 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗಳನ್ನು ಈಗಾಗಲೇ ಬಿಸಿಸಿಐ ಯುಎಇಗೆ ಕಳುಹಿಸಿಕೊಟ್ಟಿದೆ. ಇಲ್ಲಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಲಿದೆ.
ಆದರೆ ಈಗಾಗಲೇ ಯುಎಇಗೆ ತೆರಳಿದ ಸಹಾಯಕ ಸಿಬ್ಬಂದಿ ಪೈಕಿ ಥ್ರೋ ಡೌನ್ ಸ್ಪೆಷಲಿಸ್ಟ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಅವರನ್ನು ಆಸ್ಟ್ರೇಲಿಯಾ ಸರಣಿಗೆ ರವಾನಿಸದೇ ಇರಲು ತೀರ್ಮಾನಿಸಿದೆ. ಆಸ್ಟ್ರೇಲಿಯಾದಲ್ಲಿ ಸರಣಿ ಆಡುವುದಕ್ಕೂ ಮೊದಲು ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯದಲ್ಲಿ ಕಾಲ ಕಳೆಯಲಿದ್ದಾರೆ.