ಮುಂಬೈ: ಐಪಿಎಲ್ ಮುಗಿದ ಮೇಲೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಕುಟುಂಬಸ್ಥರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ನೋ ಎಂಟ್ರಿ ಎಂದಿದೆ.
ಆಸ್ಟ್ರೇಲಿಯಾಕ್ಕೆ ತೆರಳಿದ ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯದಲ್ಲಿ ಕಳೆಯಬೇಕು. ಕ್ವಾರಂಟೈನ್ ಗೊಳಗಾಗಬೇಕು ಎಂದಿರುವ ಅಲ್ಲಿನ ಕ್ರಿಕೆಟ್ ಮಂಡಳಿ ಸುರಕ್ಷತಾ ದೃಷ್ಟಿಯಿಂದ ಕುಟುಂಬಸ್ಥರಿಗೆ ಅವಕಾಶವಿರಲ್ಲ ಎಂದಿದೆ. ಆದರೆ ಸುದೀರ್ಘ ಕಾಲ ಕುಟುಂಬಸ್ಥರಿಂದ ದೂರವಿದ್ದರೆ ಆಟಗಾರರು ಮಾನಸಿಕ ಒತ್ತಡಕ್ಕೊಳಗಾಗಬಹುದು. ಹೀಗಾಗಿ ಕುಟುಂಬಸ್ಥರಿಗೆ ಅವಕಾಶ ಕೊಡಿ ಎಂದು ಬಿಸಿಸಿಐ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ.