Publish Date: Thu, 01 Oct 2020 (12:26 IST)
Updated Date: Thu, 01 Oct 2020 (12:28 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಡೆಬಡಿಯ ಆರಂಭಿಕ ಆಟಗಾರ್ತಿ ಸ್ಮೃತಿ ಮಂಥನಾ ಐಪಿಎಲ್ ಮತ್ತು ತನ್ನ ಫೇವರಿಟ್ ಆಟಗಾರನ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ.
ಈ ವೇಳೆ ಐಪಿಎಲ್ 13 ರಲ್ಲಿ ತನ್ನ ಫೇವರಿಟ್ ಆಟಗಾರ ಯಾರೆಂದು ಬಹಿರಂಗಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೇರಳ ಮೂಲದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಎಂದರೆ ಸ್ಮೃತಿಗೆ ಇಷ್ಟವಂತೆ. ಸಂಜು ಸ್ಯಾಮ್ಸನ್ ಮೋಡಿಯಿಂದ ಸ್ಮೃತಿ ಈಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಲು ಶುರು ಮಾಡಿದ್ದಾರಂತೆ. ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುವುದನ್ನು ನೋಡಿ ಆತನ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದೇನೆ. ನನಗೆ ಆತನ ಬ್ಯಾಟಿಂಗ್ ತುಂಬಾ ಇಷ್ಟ. ಹೀಗಾಗಿ ಈಗ ರಾಜಸ್ಥಾನ್ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ.