Publish Date: Thu, 01 Oct 2020 (10:17 IST)
Updated Date: Thu, 01 Oct 2020 (10:19 IST)
ದುಬೈ: ಕೊರೋನಾ ಬಳಿಕ ಐಸಿಸಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ರಸ ಬಳಕೆ ಮಾಡಬಾರದು ಎಂಬ ನಿಯಮ ಮಾಡಿದೆ. ಆದರೆ ರಾಜಸ್ತಾನ್ ರಾಯಲ್ಸ್ ಆಟಗಾರ ರಾಬಿನ್ ಉತ್ತಪ್ಪ ನಿಯಮ ಮರೆತು ಚೆಂಡಿಗೆ ಜೊಲ್ಲು ರಸ ಹಚ್ಚಿದ ಘಟನೆ ನಿನ್ನೆ ನಡೆದಿದೆ.
ನಿನ್ನೆ ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಉತ್ತಪ್ಪ ಈ ಪ್ರಮಾದವೆಸಗಿದ್ದಾರೆ. ಇದು ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆದರೆ ಸದ್ಯಕ್ಕೆ ಆಟಗಾರರಿಗೆ ಈ ನಿಯಮಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು ಎಂಬ ಕಾರಣಕ್ಕೆ ಐಸಿಸಿ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ಮಾತ್ರ ನೀಡಲು ನಿರ್ಧರಿಸಿದೆ. ಹೀಗಾಗಿ ಉತ್ತಪ್ಪ ದಂಡದಿಂದ ಪಾರಾಗಿದ್ದಾರೆ.