Publish Date: Thu, 01 Oct 2020 (11:45 IST)
Updated Date: Thu, 01 Oct 2020 (11:50 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈಗ ನಾಯಕ ವಿರಾಟ್ ಕೊಹ್ಲಿಗೆ ಯುವ ಆರಂಭಿಕ ದೇವದತ್ತ್ ಪಡಿಕ್ಕಲ್ ಜೋಡಿಯಾಗಿದ್ದಾರೆ!
ಆರ್ ಸಿಬಿಯಲ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೆಂಟರ್ ಶಿಪ್ ಪ್ರೋಗ್ರಾಂ ಅಳವಡಿಸಲಾಗಿದ್ದು, ಅದರಂತೆ ಒಬ್ಬ ಯುವ ಆಟಗಾರನಿಗೆ ಒಬ್ಬ ಅನುಭವಿ ಆಟಗಾರನನ್ನು ಜೋಡಿ ಮಾಡಲಾಗಿದೆ. ಅದರಂತೆ ಈಗ ದೇವದತ್ತ್ ಪಡಿಕ್ಕಲ್ ಗೆ ಮೆಂಟರ್ ಆಗಿ ಕೊಹ್ಲಿ ಇದ್ದಾರೆ. ಯುವ ವೇಗಿ ನವದೀಪ್ ಸೈನಿ ಮೆಂಟರ್ ಶಿಪ್ ಜವಾಬ್ಧಾರಿ ಹಿರಿಯ ವೇಗಿ ಡೇಲ್ ಸ್ಟೈನ್ ರದ್ದಾಗಿರುತ್ತದೆ. ಇದು ಅವರ ಭವಿಷ್ಯಕ್ಕೂ ಉಪಯೋಗವಾಗಲಿದೆ ಎಂಬುದು ಆರ್ ಸಿಬಿ ಮ್ಯಾನೇಜ್ ಮೆಂಟ್ ಲೆಕ್ಕಾಚಾರ.