Publish Date: Tue, 03 Nov 2020 (09:29 IST)
Updated Date: Tue, 03 Nov 2020 (09:30 IST)
ದುಬೈ: ಐಪಿಎಲ್ 13 ರಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಟೀಕೆಗೆ ಗುರಿಯಾದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಶೇನ್ ವ್ಯಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಶೇನ್ ವ್ಯಾಟ್ಸನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಐಪಿಎಲ್ ಸೇರಿದಂತೆ ಲೀಗ್ ಕ್ರಿಕೆಟ್ ಕೂಟಗಳಲ್ಲೂ ಆಡದೇ ಇರಲು ನಿರ್ಧರಿಸಿದ್ದಾರೆ. 2018 ರಿಂದ ಅವರು ಚೆನ್ನೈ ತಂಡದ ಭಾಗವಾಗಿದ್ದಾರೆ. ಆ ಸೀಸನ್ ನಲ್ಲಿ ಫೈನಲ್ ಪಂದ್ಯದಲ್ಲಿ ಶತಕ ಭಾರಿಸಿ ತಂಡಕ್ಕೆ ಗೆಲುವು ಕೊಡಿಸಿದ್ದರು. ಇನ್ನು, ನಿನ್ನೆಯ ಪಂದ್ಯದ ಬಳಿಕ ತಂಡದ ಎದುರು ತಮ್ಮ ನಿರ್ಧಾರ ತಿಳಿಸುವಾಗ ಅವರು ತುಂಬಾ ಭಾವುಕರಾದರು ಎನ್ನಲಾಗಿದೆ.