Publish Date: Mon, 02 Nov 2020 (10:02 IST)
Updated Date: Mon, 02 Nov 2020 (10:04 IST)
ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವೇ ನಿಮ್ಮ ಕೊನೆಯ ಐಪಿಎಲ್ ಪಂದ್ಯವಾ ಎಂಬ ಪ್ರಶ್ನೆಗೆ ಸಿಎಸ್ ಕೆ ನಾಯಕ ಧೋನಿ ಸ್ಪಷ್ಟನೆ ನೀಡಿದ್ದಾರೆ.
ಧೋನಿ ಇತ್ತೀಚೆಗೆ ಪ್ರತೀ ಪಂದ್ಯದ ಬಳಿಕ ಯುವ ಕ್ರಿಕೆಟಿಗರಿಗೆ ಜೆರ್ಸಿ ನೀಡುವುದು, ಅವರಿಗೆ ಟಿಪ್ಸ್ ನೀಡುವುದು ಇತ್ಯಾದಿ ಮಾಡುತ್ತಿರುವುದರಿಂದ ಇದು ಅವರ ಪಾಲಿನ ಕೊನೆಯ ಐಪಿಎಲ್ ಆಗಿರಬಹುದು. ಅವರಿನ್ನು ಐಪಿಎಲ್ ನಿಂದಲೂ ನಿವೃತ್ತಿ ಹೇಳಬಹುದು ಎಂಬಿತ್ಯಾದಿ ಅನುಮಾನಗಳು ಎದ್ದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಧೋನಿ ಖಂಡಿತಾ ಇದು ಕೊನೆಯ ಐಪಿಎಲ್ ಅಲ್ಲ ಎಂದಿದ್ದಾರೆ. ಇದು ಧೋನಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಹೀಗಾಗಿ ಧೋನಿ ಮುಂದಿನ ಐಪಿಎಲ್ ನಲ್ಲಿ ಆಡುವುದು ಖಚಿತವಾಗಿದೆ.