Publish Date: Mon, 02 Nov 2020 (10:20 IST)
Updated Date: Mon, 02 Nov 2020 (10:21 IST)
ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಕನಸಿನಲ್ಲಿದ್ದ ಪಂಜಾಬ್ ಗೆ ಚೆನ್ನೈ ತಣ್ಣೀರೆರಚಿದ್ದರೆ, ಡೆಲ್ಲಿ ಕನಸಿಗೆ ರಾಜಸ್ಥಾನ್ ಕೊಳ್ಳಿಯಿಟ್ಟಿತ್ತು. ಇದೀಗ ಆರ್ ಸಿಬಿ ಮತ್ತು ಡೆಲ್ಲಿ ನಡುವೆ ಇಂದು ನಡೆಯಲಿರುವ ಲೀಗ್ ಪಂದ್ಯಕ್ಕೆ ಮಹತ್ವ ಬಂದಿದೆ.
ಅಂಕಪಟ್ಟಿಯಲ್ಲಿ ಸದ್ಯಕ್ಕೆ ಬೆಂಗಳೂರು 2 ನೇ ಸ್ಥಾನದಲ್ಲಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳ ಪೈಕಿ ಆರ್ ಸಿಬಿ ಎರಡನೇ ತಂಡವಾಗಿ ಪ್ಲೇ ಆಫ್ ಗೆ ಹೋಗಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಇಂದಿನ ಪಂದ್ಯ ಸೋತರೆ ಡೆಲ್ಲಿ ಎರಡನೇ ಸ್ಥಾನವಾಗಿ ಪ್ಲೇ ಆಫ್ ಗೆ ಹೋಗಲಿದೆ. ಆರ್ ಸಿಬಿ ಇಂದು ಸೋತರೂ 21 ರನ್ ಗಳಿಗಿಂತ ಹೆಚ್ಚು ಅಂತರದಲ್ಲಿ ಅಥವಾ 14 ಬಾಲ್ ಗಳು ಬಾಕಿಯಿರುವ ಮೊದಲೇ ಸೋಲಬಾರದು! ಒಂದು ವೇಳೆ ಈ ರೀತಿ ಸೋತು ಸನ್ ರೈಸರ್ಸ್ ಹೈದರಾಬಾದ್ ಮುಂಬೈ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಆರ್ ಸಿಬಿ ಪ್ಲೇ ಆಫ್ ಕನಸು ಭಗ್ನವಾಗಲಿದೆ. ಹೀಗಾಗಿ ಇಂದಿನ ಪಂದ್ಯ ಎರಡೂ ತಂಡಗಳಿಗೆ ಕತ್ತಿಯ ಮೇಲಿನ ನಡಿಗೆಯಾಗಲಿದೆ.