Publish Date: Fri, 09 Oct 2020 (11:26 IST)
Updated Date: Fri, 09 Oct 2020 (11:28 IST)
ದುಬೈ: ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ಒಂದೇ ಒಂದು ಗೆಲುವಿನ ಬ್ರೇಕ್ ಥ್ರೂ ಎದಿರು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಂಡವನ್ನು ಕೂಡಿಕೊಂಡಿರುವುದು ಅದಕ್ಕೆ ಹೊಸ ಚೈತನ್ಯ ನೀಡಿದೆ.
ಆದರೆ ಇಂದಿನ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ರಾಜಸ್ಥಾನ್ ಪರ ಆಡುವುದು ಅನುಮಾನ. ಈಗಷ್ಟೇ ತಂಡವನ್ನು ಕೂಡಿಕೊಂಡಿರುವ ಅವರು ಕೊರೋನಾ ನಿಯಮಾನುಸಾರ ಕ್ವಾರಂಟೈನ್ ಅವಧಿ ಮುಗಿಸಿ ಪರೀಕ್ಷೆಗೊಳಗಾಗಿ ಬಳಿಕ ತಂಡ ಕೂಡಿಕೊಳ್ಳಬೇಕಿದೆ. ಹೀಗಾಗಿ ಮುಂದಿನ ಪಂದ್ಯಕ್ಕಾದರೂ ಅವರು ಆಡುವ ಬಳಗದಲ್ಲಿ ಲಭ್ಯರಿರುವ ಸಾಧ‍್ಯತೆಯಿದೆ.