Publish Date: Fri, 09 Oct 2020 (10:27 IST)
Updated Date: Fri, 09 Oct 2020 (11:05 IST)
ದುಬೈ: ಐಪಿಎಲ್ 13 ರಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಕೇವಲ 42 ರನ್ ಗಳಿಸಿ ಕಳಪೆ ಫಾರ್ಮ್ ಮುಂದುವರಿಸುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ.
ಅವರನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಕೂಗು ಜೋರಾಗುತ್ತಿದೆ. ಈ ನಡುವೆ ಮ್ಯಾಕ್ಸ್ ವೆಲ್ ಪ್ರದರ್ಶನ ಮತ್ತು ಅವರಿಗೆ ಗೇಟ್ ಪಾಸ್ ಕೊಡುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರಿಗೆ ಇನ್ನೊಂದು ಚಾನ್ಸ್ ಕೊಟ್ಟು ನೋಡಬಹುದು ಎಂದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಅವರನ್ನು ಕಿತ್ತೊಗೆಯಿರಿ ಎಂದು ಒತ್ತಾಯಿಸುತ್ತಿದ್ದಾರೆ.