Publish Date: Fri, 09 Oct 2020 (10:07 IST)
Updated Date: Fri, 09 Oct 2020 (10:10 IST)
ದುಬೈ: ಐಪಿಎಲ್ 13 ರ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೈ ಕೊಟ್ಟಿದ್ದಕ್ಕೆ ಸುರೇಶ್ ರೈನಾ ಮೇಲೆ ಚೆನ್ನೈ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ರೈನಾ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಿಯಾಂಕಾ ಜತೆಗೆ ವರ್ಕೌಟ್ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶದಿಂದಲೇ ಕಾಮೆಂಟ್ ಮಾಡಿದ್ದಾರೆ. ನೀವು ಪತ್ನಿ ಜತೆಗೇ ವರ್ಕೌಟ್ ಮಾಡಿಕೊಂಡಿರಿ. ನಮಗೆ ಜಾಧವ್ ಇದ್ದಾರೆ. ನಿಮಗೆ ಎಷ್ಟು ಕಾಡಿ-ಬೇಡಿ ಮಾಡೋದು. ವಾಪಸ್ ಚೆನ್ನೈಗೆ ಬರಬೇಡಿ ಎಂದು ಕೋಪದಿಂದಲೇ ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು, ಚೆನ್ನೈ ಹೀನಾಯ ಸ್ಥಿತಿ ನಿಮಗೆ ಕಾಣಿಸುತ್ತಿಲ್ಲವೇ? ತಂಡಕ್ಕೆ ಮರಳಿ ಬನ್ನಿ ಎಂದು ಮನವಿ ಮಾಡಿದ್ದಾರೆ.