ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಸೋಲನುಭವಿಸಿ ನಿರಾಸೆ ಅನುಭವಿಸಿದೆ. ಹಾಗಿದ್ದರೆ ಈ ಪಂದ್ಯದಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ?
ಘಟಾನುಘಟಿಗಳನ್ನೇ ಹೊಂದಿದ್ದ ರೋಹಿತ್ ಪಡೆಯನ್ನು ಧೋನಿ ನೇತೃತ್ವದ ಚೆನ್ನೈ ಸರಿಯಾಗಿಯೇ ಕಟ್ಟಿಹಾಕಿದೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಆರಂಭದಲ್ಲಿ ರನ್ ಗಳಿಸಲು ವಿಫಲರಾಗಿದ್ದು ತಂಡಕ್ಕೆ ಹೊಡೆತ ನೀಡಿತು. ಡಿ ಕಾಕ್ ಗೆ ರೋಹಿತ್ ಜತೆಯಾಗಿದ್ದರೆ ಮುಂಬೈ ಮೊತ್ತ 200 ದಾಟುತ್ತಿತ್ತು. ಅಲ್ಲದೆ, ಕೆಳ ಕ್ರಮಾಂಕದಲ್ಲಾದರೂ ರನ್ ಗಳಿಸಬೇಕಿತ್ತು. ಆದರೆ ಹಾರ್ದಿಕ್ ಪಾಂಡ್ಯ, ಕೃನಾಲ್, ಕಿರನ್ ಪೊಲ್ಲಾರ್ಡ್ ವಿಫಲರಾಗಿದ್ದು ರನ್ ಮೊತ್ತ ಹೆಚ್ಚಿಸಲು ಅಡ್ಡಿಯಾಯಿತು. ಬಿಗ್ ಹಿಟ್ಟರ್ ಗಳು ರನ್ ಗಳಿಸಿದ್ದರೆ ಮುಂಬೈ ಕತೆಯೇ ಬೇರೆಯಾಗುತ್ತಿತ್ತು.