Publish Date: Sat, 10 Oct 2020 (10:30 IST)
Updated Date: Sat, 10 Oct 2020 (10:31 IST)
ದುಬೈ: ಐಪಿಎಲ್ ನಲ್ಲಿ ಸತತ 19 ಪಂದ್ಯಗಳನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಕಗಿಸೊ ರಬಾಡ ಕನ್ನಡಿಗ ವೇಗಿ ಆರ್ ವಿನಯ್ ಕುಮಾರ್ ದಾಖಲೆ ಮುರಿದಿದ್ದಾರೆ.
ವಿನಯ್ ಕುಮಾರ್ 2012-13 ನೇ ಸೀಸನ್ ನಲ್ಲಿ ಸತತ 19 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನದಲ್ಲಿದ್ದರು. ಸಿಎಸ್ ಕೆ ತಂಡದ ಡ್ವಾನ್ ಬ್ರಾವೋ ಸತತ 27 ಪಂದ್ಯಗಳನ್ನಾಡಿ ಸತತವಾಗಿ ಅತೀ ಹೆಚ್ಚು ಪಂದ್ಯಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರಬಾಡ ನಿನ್ನೆಯ ಪಂದ್ಯವಾಡಿದ ಮೇಲೆ 20 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನಿಯಾದರು. ಈ ಐಪಿಎಲ್ ನಲ್ಲಿ 6 ಪಂದ್ಯವಾಡಿರುವ ರಬಾಡ 15 ವಿಕೆಟ್ ಕಬಳಿಸಿದ್ದರು.