Publish Date: Sat, 10 Oct 2020 (09:03 IST)
Updated Date: Sat, 10 Oct 2020 (09:05 IST)
ದುಬೈ: ಸಿಎಸ್ ಕೆ ಐಪಿಎಲ್ 13 ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಯೊಬ್ಬ ನಾಯಕ ಧೋನಿ ಪುತ್ರಿ ಜೀವಾಗೆ ಬೆದರಿಕೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಧೋನಿ ಪುತ್ರಿಯನ್ನು ಮಾನಭಂಗ ಮಾಡುವುದಾಗಿ ಅಥವಾ ದೈಹಿಕ ಹಲ್ಲೆ ನಡೆಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ವ್ಯಕ್ತಿಗಳ ಮನಸ್ಥಿತಿಯ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಸ್ ಕೆ ಸೋಲಿಗೆ ಐದು ವರ್ಷದ ಧೋನಿ ಪುತ್ರಿ ಜೀವಾ ಮೇಲೆ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ನಿಜಕ್ಕೂ ಖೇದಕರ.