Publish Date: Sun, 01 Nov 2020 (11:14 IST)
Updated Date: Sun, 01 Nov 2020 (11:15 IST)
ದುಬೈ: ಐಪಿಎಲ್ 13 ರಲ್ಲಿ ಇಂದು ಚೆನ್ನೈ-ಪಂಜಾಬ್ ಮತ್ತು ಕೆಕೆಆರ್-ರಾಜಸ್ಥಾನ್ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ಈ ಎರಡು ತಂಡಗಳ ಪೈಕಿ ಯಾರೇ ಗೆದ್ದರೂ ಬೆಂಗಳೂರು ಮತ್ತು ಡೆಲ್ಲಿ ಪ್ಲೇ ಆಫ್ ಹಾದಿಗೆ ಮುಳ್ಳಾಗಲಿದೆ.
ಅದರಲ್ಲೂ ಡೆಲ್ಲಿಗಂತೂ ಇಂದು ಪಂಜಾಬ್ ಗೆದ್ದರೆ ಪ್ಲೇ ಆಫ್ ಕನಸಾಗಿಯೇ ಉಳಿಯಲಿದೆ. ಇನ್ನು, ಬೆಂಗಳೂರಿಗೆ ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ವಿಶೇಷವೆಂದರೆ ಈ ಎರಡೂ ತಂಡಗಳಿಗೂ ಒಂದೇ ಪಂದ್ಯ ಬಾಕಿಯಿದ್ದು, ಆ ಪಂದ್ಯವನ್ನು ಗೆಲ್ಲುವುದು ಎರಡೂ ತಂಡಕ್ಕೂ ಅನಿವಾರ್ಯವಾಗಿದೆ. ಹೀಗಾಗಿ ಆ ಪಂದ್ಯದಲ್ಲಿ ಸೋತ ತಂಡ ಮನೆಗೆ ಮರಳಬೇಕಾಗಬಹುದು.