Publish Date: Wed, 07 Oct 2020 (08:58 IST)
Updated Date: Wed, 07 Oct 2020 (09:00 IST)
ದುಬೈ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಆಟಕ್ಕೆ ರಾಜಸ್ಥಾನ್ ರಾಯಲ್ಸ್ ಸಂಪೂರ್ಣವಾಗಿ ಶರಣಾಗತಿಯಾಗಿದೆ. 57 ರನ್ ಗಳ ಹೀನಾಯ ಸೋಲೊಪ್ಪಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಭರ್ಜರಿ ಬ್ಯಾಟಿಂಗ್ ನಡೆಸಿತು. ಕ್ವಿಂಟನ್ ಡಿ ಕಾಕ್ 23, ರೋಹಿತ್ ಶರ್ಮಾ 35, ಸೂರ್ಯಕುಮಾರ್ ಅಜೇಯ 79, ಹಾರ್ದಿಕ್ ಪಾಂಡ್ಯ ಅಜೇಯ 30 ರನ್ ಗಳಿಸಿದರು. ಇದರಿಂದಾಗಿ ಮುಂಬೈ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.
ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ರಾಜಸ್ಥಾನ್ ಸಂಪೂರ್ಣ ಎಡವಿತು. 18.1 ಓವರ್ ಗಳಲ್ಲಿ 136 ರನ್ ಗಳಿಗೆ ಆಲೌಟ್ ಆಯಿತು. ಜೋಸ್ ಬಟ್ಲರ್ 70 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ದೊಡ್ಡ ಮೊತ್ತ ಗಳಿಸಲಿಲ್ಲ. ವೇಗಿ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿ ರಾಜಸ್ಥಾನ್ ಗೆ ಕಡಿವಾಣ ಹಾಕಿದರು. ಇದರಿಂದಾಗಿ ರಾಜಸ್ಥಾನ್ ಸುಲಭವಾಗಿ ಶರಣಾಯಿತು.