Publish Date: Tue, 06 Oct 2020 (11:21 IST)
Updated Date: Tue, 06 Oct 2020 (11:23 IST)
ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಭುವನೇಶ್ವರ್ ಕುಮಾರ್ ಗಾಯದ ರೂಪದಲ್ಲಿ ಶಾಕ್ ಸಿಕ್ಕ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಇಂತಹದ್ದೇ ಆಘಾತಕ್ಕೊಳಗಾಗಿದೆ.
ಡೆಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದ ಕಾರಣದಿಂದ ಐಪಿಎಲ್ 13 ಕೂಟದಿಂದ ಹೊರಬೀಳುವ ಅನಿವಾರ್ಯತೆ ಎದುರಾಗಿದೆ. ಬೆರಳಿಗೆ ಗಾಯ ಮಾಡಿಕೊಂಡಿರುವ ಅಮಿತ್ ಮುಂದಿನ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಡೆಲ್ಲಿ ತಂಡ ಪ್ರಕಟಿಸಿದೆ. ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 2 ಓವರ್ ಎಸೆದಿದ್ದರು. ಅವರ ಗಾಯ ಗಂಭೀರವಾಗಿರುವ ಕಾರಣ ಮುಂದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗದು ಎನ್ನಲಾಗಿದೆ.