Select Your Language

Notifications

webdunia
webdunia
webdunia
webdunia

ಐಪಿಎಲ್ 13: ಮತ್ತೆ ಮಂಕಡ್ ಔಟ್ ಮಾಡಲೆತ್ನಿಸಿದ ಆರ್ ಅಶ್ವಿನ್

ರವಿಚಂದ್ರನ್ ಅಶ್ವಿನ್
ದುಬೈ: 2019 ರ ಐಪಿಎಲ್ ಪಂದ್ಯದಲ್ಲಿ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ರವಿಚಂದ್ರನ್ ಅಶ್ವಿನ್ ನಿನ್ನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತೆ ಅದೇ ಪ್ರಯತ್ನ ನಡೆಸಿದ್ದಾರೆ.


ಆರ್ ಸಿಬಿ ಆರಂಭಿಕ ಏರಾನ್ ಫಿಂಚ್ ರನ್ನು ಮಂಕಡ್ ಔಟ್ ಮಾಡಲು ಪ್ರಯತ್ನಿಸಿದ್ದಾರೆ. ಅಶ್ವಿನ್ ಬೌಲಿಂಗ್ ಮಾಡುವಾಗ ಫಿಂಚ್ ಕ್ರೀಸ್ ಬಿಟ್ಟಿದ್ದರು. ತಕ್ಷಣ ಅಶ್ವಿನ್ ಬಾಲ್ ಎಸೆಯದೇ ವಿಕೆಟ್ ಗೆ ತಾಕಿಸಿ ಔಟ್ ಮಾಡಲೆತ್ನಿಸಿದರು. ಆದರೆ ತಕ್ಷಣ ಎಚ್ಚೆತ್ತುಕೊಂಡ ಫಿಂಚ್ ವಾಪಸ್ ಕ್ರೀಸ್ ಗೆ ಬಂದರು. ಬಳಿಕ ಟ್ವಿಟರ್ ನಲ್ಲಿ ಈ ಬಗ್ಗೆ ತಮಾಷೆಯಾಗಿ ಬರೆದುಕೊಂಡಿರುವ ‘ನಾನು ಈಗಲೇ ವಾರ್ನಿಂಗ್ ಕೊಡುತ್ತಿದ್ದೇನೆ. ಇದನ್ನು ಅಧಿಕೃತವಾಗಿ ಹೇಳುತ್ತಿದ್ದೇನೆ. ಆಮೇಲೆ ನನ್ನನ್ನು ದೂರಬೇಡಿ’ ಎಂದಿರುವ ಕ್ರೀಸ್ ಬಿಟ್ಟರೆ ಮಂಕಡ್ ಔಟ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ಸವಾಲು