Publish Date: Sun, 01 Nov 2020 (10:28 IST)
Updated Date: Sun, 01 Nov 2020 (10:29 IST)
ದುಬೈ: ಐಪಿಎಲ್ 13 ರ ಇಂದಿನ ಎರಡನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದ್ದು, ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯಕ್ಕೆ ಅಷ್ಟೇನೂ ಮಹತ್ವವಿಲ್ಲ.
ಎರಡೂ ತಂಡಗಳೂ ಮುಂದಿನ ಹಂತದ ಅರ್ಹತೆ ಕಳೆದುಕೊಂಡಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹೋರಾಟ ನಡೆಸಲಿವೆ. ರಾಜಸ್ಥಾನ್ ಗೆ ಹೋಲಿಸಿದರೆ ಕೆಕೆಆರ್ ಕೊಂಚ ಬಲಿಷ್ಠವಾಗಿದೆ. ಕೊನೆಯ ಪಂದ್ಯಗಳಲ್ಲಿ ಸಿಡಿದು ಒಳ್ಳೆಯ ನೆನಪಿನೊಂದಿಗೆ ಐಪಿಎಲ್ 13 ಗೆ ವಿದಾಯ ಹೇಳಲು ಎರಡೂ ತಂಡಗಳು ಪ್ರಯತ್ನ ನಡೆಸಲಿವೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.