Publish Date: Sat, 03 Oct 2020 (09:56 IST)
Updated Date: Sat, 03 Oct 2020 (09:57 IST)
ದುಬೈ: ಸತತವಾಗಿ ಮೂರು ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನದ ಬಗ್ಗೆ ಸ್ವತಃ ನಾಯಕ ಧೋನಿ ಹತಾಶೆಗೊಳಗಾಗಿದ್ದಾರೆ.
ಹೈದರಾಬಾದ್ ವಿರುದ್ಧ ಸೋಲಿನ ಬಳಿಕ ಮಾತನಾಡಿರುವ ಧೋನಿ ನಾವು ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಿದ್ದೇವೆ. ನಾವು ಸ್ವಲ್ಪ ವೃತ್ತಿಪರತೆಯಿಂದ ಆಡಬೇಕಿದೆ. ನೋ ಬಾಲ್ ಎಸೆಯುವುದನ್ನು ಕಡಿಮೆ ಮಾಡಬೇಕಿದೆ, ಸರಿಯಾಗಿ ಬ್ಯಾಟ್ ಮಾಡಬೇಕಿದೆ ಎಂದಿರುವ ಧೋನಿ ಇಲ್ಲಿಯ ಒಣ ವಾತಾವರಣದಲ್ಲೂ ಆಡುವುದು ಸವಾಲು ಎಂದಿದ್ದಾರೆ.