Publish Date: Fri, 23 Oct 2020 (09:21 IST)
Updated Date: Fri, 23 Oct 2020 (09:23 IST)
ದುಬೈ: ಐಪಿಎಲ್ 13 ರಲ್ಲಿ ನಿರಾಶಾದಾಯಕ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಿಕರು ಮುಂದಿನ ಐಪಿಎಲ್ ವೇಳೆಗೆ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ‍್ಯತೆಯಿದೆ.
ಮುಂದಿನ ಐಪಿಎಲ್ ವೇಳೆಗೆ ತಂಡದಿಂದ ಹಲವು ಕ್ರಿಕೆಟಿಗರನ್ನು ಕೈ ಬಿಡುವ ಸಾಧ‍್ಯತೆಯಿದ್ದು, ಹೊಸದಾಗಿ ತಂಡ ಕಟ್ಟುವ ಸಾಧ‍್ಯತೆಯಿದೆ. ಇತ್ತೀಚೆಗಷ್ಟೇ ನಾಯಕ ಧೋನಿ ಯುವ ಆಟಗಾರರಲ್ಲಿ ಪ್ರತಿಭೆ ಕಾಣುತ್ತಿಲ್ಲ ಎಂದು ದೂರಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇನ್ನು ಕೆಲವರು ನಾಯಕತ್ವ ಬದಲಾವಣೆಯಾಗಬೇಕೆಂದು ಆಗ್ರಹಿಸಿದ್ದರು. ಅಲ್ಲದೆ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಿಎಸ್ ಕೆ ಬ್ಯಾಟ್ಸ್ ಮನ್ ಗಳು ತಮ್ಮ ಕರ್ತವ್ಯವನ್ನು ಸರ್ಕಾರಿ ನೌಕರಿ ಎಂದುಕೊಂಡಿದ್ದಾರೆ ಎಂದು ಟೀಕಿಸಿದ್ದರು. ಇಂತಹ ಜಡ್ಡು ಹಿಡಿದು ಕೂತಿರುವ ಆಟಗಾರರನ್ನೆಲ್ಲಾ ಹೊರ ಹಾಕಿ ಹೊಸದಾಗಿ ತಂಡ ರಚಿಸುವ ಸಾಧ್ಯತೆಯಿದೆ.