Publish Date: Thu, 22 Oct 2020 (10:19 IST)
Updated Date: Thu, 22 Oct 2020 (10:20 IST)
ದುಬೈ: ಐಪಿಎಲ್ 13 ರಲ್ಲಿ ಕೆಕೆಆರ್ ವಿರುದ್ಧ ಆಲ್ ರೌಂಡರ್ ಪ್ರದರ್ಶನ ನೀಡಿ ಭರ್ಜರಿ ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
‘ನಮ್ಮ ನಿರ್ಧಾರಗಳು ಇಷ್ಟ ಬಂದ ಹಾಗೆ ನಿರ್ಧಾರವಾಗಲ್ಲ. ನಮ್ಮ ಮ್ಯಾನೇಜ್ ಮೆಂಟ್ ಎಲ್ಲದಕ್ಕೂ ಪ್ಲ್ಯಾನ್ ಎ, ಬಿ ಸಿದ್ಧವಾಗಿಟ್ಟುಕೊಂಡಿರುತ್ತದೆ. ಯೋಜಿತವಾಗಿ ನಮ್ಮ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಆರ್ ಸಿಬಿ ಮೇಲೆ ಬಹಳಷ್ಟು ಜನರಿಗೆ ನಂಬಿಕೆಯಿಲ್ಲ. ಆದರೆ ನಾನು, ನಮ್ಮ ತಂಡದ ಕ್ರಿಕೆಟಿಗರಿಗೆ ನಮ್ಮ ಮೇಲೆ ನಂಬಿಕೆಯಿದೆ’ ಎಂದು ಕೊಹ್ಲಿ ಟೀಕಾರಾರರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.