Publish Date: Tue, 03 Nov 2020 (10:05 IST)
Updated Date: Tue, 03 Nov 2020 (10:07 IST)
ಚೆನ್ನೈ: ಈ ಬಾರಿಯ ಐಪಿಎಲ್ ನಿಂದ ಮೊದಲನೆಯ ತಂಡವಾಗಿ ಹೊರಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಐಪಿಎಲ್ ಗೆ ತಂಡದಲ್ಲಿ ಭಾರೀ ಬದಲಾವಣೆ ತರುವ ಸಾಧ‍್ಯತೆಯಿದೆ.
ಆದರೆ ನಾಯಕ ಧೋನಿ ಮುಂದಿನ ಐಪಿಎಲ್ ನಲ್ಲೂ ಆಡುವುದಾಗಿ ತಿಳಿಸಿರುವುದರಿಂದ ಅವರೇ ನಾಯಕರಾಗಿ ಮುಂದುವರಿಯುವುದು ಖಚಿತವಾಗಿದೆ. ಆದರೆ ಉಳಿದ ಆಟಗಾರರು ತಂಡದಿಂದ ಹೊರಹೋಗುವ ಸಾಧ್ಯತೆಯಿದೆ. ಅವರಲ್ಲಿ ಪ್ರಮುಖರಾದವರು ಕೇದಾರ್ ಜಾಧವ್, ಪಿಯೂಷ್ ಚಾವ್ಲಾ ಮತ್ತು ಶೇನ್ ವ್ಯಾಟ್ಸನ್. ಈ ಮೂರೂ ಆಟಗಾರರ ಮೇಲೆ ಫ್ರಾಂಚೈಸಿಗೆ ಭಾರೀ ಭರವಸೆಯಿತ್ತು. ಆದರೆ ಮೂವರೂ ಹೀನಾಯ ಪ್ರದರ್ಶನವಿತ್ತಿದ್ದಾರೆ. ಈ ಪೈಕಿ ಶೇನ್ ವ್ಯಾಟ್ಸನ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಇವರು ತಮ್ಮ ಸ್ಥಾನಕ್ಕೆ ತಕ್ಕ ಆಟವಾಡಿದ್ದರೆ ಚೆನ್ನೈಗೆ ಈ ಬಾರಿ ಈ ಗತಿ ಬರುತ್ತಿರಲಿಲ್ಲ. ಹೀಗಾಗಿ ಪ್ರದರ್ಶನ ನೀಡದ ಆಟಗಾರರನ್ನು ಹೊರಹಾಕುವ ಸಾಧ್ಯತೆಯಿದೆ.