Publish Date: Fri, 29 Mar 2019 (09:19 IST)
Updated Date: Fri, 29 Mar 2019 (09:21 IST)
ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಳಪೆ ಅಂಪಾಯರಿಂಗ್ ನಿಂದಾ ಸೋತ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಿಟ್ಟು ಹೊರಹಾಕಿದ್ದಾರೆ.
ಅಂತಿಮ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಾಗಿದ್ದಾಗ ಮುಂಬೈ ಇಂಡಿಯನ್ಸ್ ಬೌಲರ್ ನೋ ಬಾಲ್ ಎಸೆದರೂ ಗಮನಿಸದ ಅಂಪಾಯರ್ ನಿಂದಾಗಿ ಆರ್ ಸಿಬಿ ಅನ್ಯಾಯವಾಗಿ ಸೋಲನುಭವಿಸಬೇಕಾಯಿತು.
ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೊಹ್ಲಿ ‘ನಾವೇನು ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದು ಐಪಿಎಲ್. ಅಂಪಾಯರ್ ಗಳು ತಮ್ಮ ಕಣ್ಣು ಬಿಟ್ಟುಕೊಂಡಿರಬೇಕು. ಇದು ನಿಜಕ್ಕೂ ಒಪ್ಪುವಂತಹದ್ದಲ್ಲ. ಒಂದು ವೇಳೆ ಸ್ಕೋರ್ ಲೆವೆಲ್ ಆಗಿದ್ದರೆ ಆ ಬಾಲ್ ನ ಪ್ರಮಾದದ ಗಂಭೀರತೆ ಎಷ್ಟು ಎಂದು ಗೊತ್ತಾಗುತ್ತಿತ್ತು. ಅಂಪಾಯರ್ ಗಳು ಎಚ್ಚರಿಕೆಯಿಂದಿರಬೇಕು’ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ