Publish Date: Fri, 29 Mar 2019 (08:47 IST)
Updated Date: Fri, 29 Mar 2019 (08:48 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ನಿಷೇಧ ಶಿಕ್ಷೆಗೊಳಗಾದ ಕರಾಳ ದಿನಗಳ ಬಗ್ಗೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಜತೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ ಅಸಭ್ಯ ಕಾಮೆಂಟ್ ಮಾಡಿದ ತಪ್ಪಿಗೆ ಕೆಲವು ದಿನ ನಿಷೇಧಕ್ಕೊಳಗಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಬಗ್ಗೆ ಜನರು ಆಡುವುದನ್ನು ಕೇಳಿ ತಮ್ಮ ನಡತೆ ಬಗ್ಗೆಯೇ ಅನುಮಾನಿಸಲು ಶುರು ಮಾಡಿದ್ದರಂತೆ ರಾಹುಲ್.
‘ನನಗೆ ನನ್ನ ಕ್ಯಾರೆಕ್ಟರ್ ಬಗ್ಗೆಯೇ ಅನುಮಾನ ಶುರುವಾಗಿತ್ತು. ಜನ ನನ್ನನ್ನು ಧ್ವೇಷಿಸುತ್ತಾರೆ ಎಂದು ಯೋಚಿಸುವುದೇ ನನಗೆ ಭಯವಾಗುತ್ತಿತ್ತು. ಹೊರಗೆ ಬರಲು, ಯಾರೊಂದಿಗಾದರೂ ಮಾತನಾಡಲೂ ಭಯವಾಗುತ್ತಿತ್ತು. ಆದರೆ ನಿಧಾನಕ್ಕೆ ವಾಸ್ತವಕ್ಕೆ ಬಂದೆ. ನನ್ನನ್ನು ನಿಜವಾಗಿ ಪ್ರೀತಿಸುವ ವ್ಯಕ್ತಿಗಳು ನಾವು ನಿನ್ನೊಂದಿಗಿದ್ದೇವೆ ಎಂದು ಭರವಸೆ ನೀಡಿದರು. ಆಗಲೇ ನಾನು ಮರಳಿ ಆತ್ಮವಿಶ್ವಾಸ ಪಡೆದಿದ್ದು’ ಎಂದು ರಾಹುಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ